ಅಮ್ಮ

ನೀ ಹೊತ್ತೆ ನನ್ನ ಒಂಭತ್ತು ತಿಂಗಳು…..
ನೀ ಸಲುಹಿದೆ ನನ್ನ ಪ್ರತಿ ನಿಮಿಷದಲು
ನಿನ್ನಿ ಪ್ರೀತಿಗೆ ಬೆಲೆ ಕಟ್ಟಲಾಗದು
ಇಂದು ನನಗೆ ನಿನ್ನ ಪ್ರೀತಿಯ ಅಮೂಲ್ಯದ ಬೆಲೆಯ
ಅರಿವಿಲ್ಲ…..?
ನಿನ್ನ ಬುದ್ದಿ ಮಾತಿಗೆ ನಾನಾಗುವೆ ಕೆಂಡದಂತೆ!
ಆದರೆ ಕುಳಿತು ಯೋಚಿಸಿದಾಗ ತಿಳಿಯುವುದು ನಿನ್ನ ಬುದ್ದಿವಾದದ ಮೌಲ್ಯ
ಹಾಗೆಯೇ ನಿನ್ನ ಹೃದಯದಲ್ಲಿರುವ ಪ್ರೀತಿಯ ನಿಸ್ವಾರ್ಥ
ಪ್ರೀತಿಗೆ ವಾತ್ಸಲ್ಯಕ್ಕೆ ಉಸಿರಾಗಿರುವ ಅಮ್ಮನಿಗಿದೋ
ನಮನ……

– ಅಭಿನಯ ಶೆಟ್ಟಿ, ದ್ವಿತೀಯ ಬಿ.ಎ.


ಸ್ನೇಹದ ದೋಣಿಯಲಿ ಸಹ ಪಯಣಿಗ

ಹಾಯ್ ಚಿನ್ನು ಹೇಗಿದ್ದೀಯಾ? ಚೆನ್ನಾಗಿದ್ದೀಯಲ್ಲ. ನಂಗೊತ್ತು ಕಣೆ ನೀನು ಚೆನ್ನಾಗಿದ್ದೀಯಾ ಎಂದು ನನ್ನ ಸ್ನೇಹಿತರ ಹರ್ತ ನಿನ್ನ ಬಗ್ಗೆ ವಿಚಾರಿಸ್ತಿನಿ. ಯಾಕೆ ಚಿನ್ನು ಇನ್ನೂ ನನ್ಮೇಲೆ ಕೋಪ ಹೋಗಿಲ್ವಾ. ಆದ್ರೆ ಒಂದ್ಮಾತಂತೂ ನಿಜ. ನಿನ್ನ ಲೆಕ್ಕದಲ್ಲಿ ನನ್ನ ಬಗ್ಗೆ ಅಸಮಧಾನ, ಕೋಪ ಇರ್ಬಹುದು. ಅದಕ್ಕೆ ನನ್ನನ್ನ ಹೊಣೆಗಾರರನ್ನಾಗಿ ಮಾಡ್ಬೇಡ. ನೀನು ನನ್ನ ಜೀವದ ಗೆಳತಿ, ಆತ್ಮೀಯಳೇ. ನಾನು ನಿನ್ಜೊತೆ ಕ್ಲೋಸಾಗಿ ಇದ್ದ್ ಮಾತ್ರಕ್ಕೆ ನೀನೆ ಏನೆನೋ ಕಲ್ಪನೆ ಮಾಡ್ಕೊಂಡ್ರೆ ಅದು ನನ್ನ ತಪ್ಪಲ್ಲ ಇನ್ನು. ಒಂದು ಹುಡ್ಗ ಒಂದು ಹುಡ್ಗಿ ಕ್ಲೋಸಾಗಿ ಇದ್ದ ಮಾತ್ರಕ್ಕೆ ಅವ್ರು ಪ್ರೇಮಿಗಳೇ ಆಗಿರ್ಬೇಕಾ? ನಿನಗೊತ್ತಾ ನಾವಿಬ್ರೂ ಐಸ್ ಕ್ರೀಮ್ ಪಾರ್ಲರಿಗೆ ಹೋಗಿ ಹೋಗಿ ಇಬ್ರೂ ಒಟ್ಟಿಗೆ ಕುಳಿತು ಐಸ್ ಕ್ರೀಂ ತಿನ್ನುತ್ತಿದ್ದರೆ ಯಾರೋ ಒಬ್ರು ಬಂದು ನೀವಿಬ್ರೂ ಪ್ರೇಮಿಗಳಾ ಎಂದಾಗ ನೀನು ನಾಚಿಕೆಯಿಂದ ಕೆಂಪು ಕೆಂಪಾದ್ರೆ ನಾನು ಸಂಕೋಚದಿಂದ ಹಿಡಿಯಷ್ಟಾದೆ. ಚಿನ್ನು ನೀನು ಮೊದ್ಲು ಹೇಳಿದ್ದೇನು ?. ನಾವಿಬ್ರೂ ಸ್ನೇಹಿತರಾಗೋಣ ಎಂದು ಆವಾಗಿನಿಂದ ಈವಾಗಿನ ವರೆಗೆ ಅದೇ ಭಾವನೆ ನನ್ನಲ್ಲಿತ್ತು. ಸ್ನೇಹಕ್ಕೂ ಪ್ರೇಮಕ್ಕೂ ವ್ಯತ್ಯಾಸವೇ ಗೊತ್ತಿಲ್ವ. ಸ್ನೇಹ ಅಜರಾಮರ, ಇರನೂತನ ಸ್ನೇಹಕ್ಕಿರುವಷ್ಟು ಶಕ್ತಿ ಪ್ರೇಮಕ್ಕಿಲ್ಲ.ಚಿನ್ನು ನಿನಗೆ ನೆನಪಿದ್ಯಾ ನೀನು ನನ್ನ ಮಾತಾಡಿಸದೇ ಒಂದು ತಿಂಗಳಾಗ್ತ ಬಂತು. ಆಕೆ ಚಿನ್ನು ಈ ರೀತಿ ಮಾಡ್ದೆ. ನಿನ್ಗೆ ನೆನಪಿದ್ಯಾ ಆ ದಿನದ ಘಟನೆ. ನೀನು ಆ ದಿನ ಪ್ರೇಮಾನುರಾಗದಿಂದ ನಿನ್ನ ಮನದಲ್ಲಿ ಅಡಗಿದ್ದ ಪ್ರೇಮವನ್ನು ನನ್ನಲ್ಲಿ ತೋಡಿಕೊಂಡಾಗ ನನಗಾಗ ಶಾಕ್ ಆಗಿತ್ತು. ನಿನ್ನಲೊಂದು ಆ ಥರದ ಭಾವನೆ ಇದೆಯಂಬ ಸತ್ಯದಿಂದ ನನಗೆ ಅಚ್ಚರಿ ಉಂಟಾಯಿತು. ಯಾಕಂದ್ರೆ ನೀನು ನನ್ನ ಸ್ನೇಹಿತೆಯಂತೆ ನನ್ನ ಕಷ್ಟ ಸುಖಗಳೆರಡರಲ್ಲೂ ಭಾಗಿಯಾಗಿದ್ದೆ. ನಿನ್ನ ಕಷ್ಟ ಸುಖಕ್ಕೆ ನಾನು ಕೈ ಜೋಡಿಸಿದ್ದೆ. ನಿಜ ಹೇಳ್ಲಾ ಚಿನ್ನು.

ನನ್ಗೆ ನಿನ್ನ ಬಗ್ಗೆ ಸ್ನೇಹ, ಗೌರವ ಮಾತ್ರ ಅದು ಬಿಟ್ರೆ ಬೇರೆ ಯಾವ ಭಾವನೆ ಇಲ್ಲ. ನಾನು ನಿನ್ನ ಅಭಿಪ್ರಾಯವನ್ನು ನಯವಾಗಿ ತಿರಸ್ಕರಿಸಿದಾಗ ಕೋಪದಿಂದ ಏನೆಲ್ಲಾ ಮಾತಾಡ್ದೆ ನೀನು. ‘ಇಷ್ಟು ದಿನ ನನ್ನ ಜೊತೆ ಚಕ್ಕಂದ ಆಡಿ ಈಗ ಏನೂ ಗೊತ್ತಿಲ್ಲದವನ ಥರಾ ಇದ್ದೀಯಾ? ಈಗ ನಾನು ಬೇಡವಾದೆನಾ, ನನ್ನ ಜೊತೆ ಇದ್ದು ನಿನ್ಗೆ ಬೇಜಾರಾಗಿ ನನ್ನ ಪ್ರೀತಿನಾ ನೀನು ನಿರಾಕರಿಸಿದ್ದು’ ಎಂದೆಲ್ಲಾ ಹೇಳಿ ಕೋಪದಿಂದ ಭುಸುಗುಟ್ಟಿದ್ದೆ. ಆ ನಿನ್ನ ಮಾತಿಂದ ನನಗೆಷ್ಟು ಆಘಾತವಾಯ್ತು ಗೊತ್ತಾ? ನಾನು ಯಾವತ್ತಾದ್ರು ನಿನ್ನ ಆ ದೃಷ್ಠಿಯಿಂದ ನೋಡಿದ್ನಾ. ಆ ರೀತಿ ನಡ್ಕೊಂಡಿದ್ನಾ? ಏಳೇಳು ಜನ್ಮದಲ್ಲೂ ನೀನೆ ನನ್ನ ಸ್ನೇಹಿತೆಯಾಗ್ಬೇಕು ಅಂತ ಬಯಸೋನು ನಾನು. ಪ್ಲೀಸ್ ಚಿನ್ನು ನಿನ್ನ ಮನಸನ್ನು ನೀನೇ ಒಂದ್ಸಲ ಪ್ರಶ್ನಿಸಿಕೋ ಆಗ ನಿನ್ಗೆ ತಿಳಿಯುತ್ತೆ. ನಿನ್ನ ಸ್ನೇಹ ತುಂಬಿದ ಮಾತು , ನಿನ್ನ ನಗು ಸಾಂತ್ವನ ಎಲ್ಲ ಮತ್ತೆ ಕೊಡ್ತಿಯಾ. ನಿನ್ನಂತಹ ಸ್ನೇಹಿತನ್ನ ಪಡೆಯೋದಕ್ಕೆ ನಾನು ಪುಣ್ಯ ಮಾಡಿರ್ಬೇಕು. ಮೋಡ ಕರಗಿ ನೀರು ಮಳೆಹನಿಯಂತೆ ಧರೆಗೆ ಉರುಳಿ ನನ್ಮೇಲಿದ್ದ ಕೋಪ ತಾಪ ಕಡಿಮೆ ಆಗ್ಲಿ. ಮೊದ್ಲಿನ ಥರಾನೆ ನನ್ಜೊತೆ ಸ್ನೇಹದಿಂದ ಇರ್ತಿಯಲ್ಲ ಚಿನ್ನು.

ಎಂದೆಂದಿಗೂ ನಿನ್ನ ಸ್ನೇಹಿತನಾಗಿರಬಯಸುವ …….

– ಬೇಬಿ ಆಚಾರ್ಯ, ದ್ವಿತೀಯ ಬಿ.ಎ.


ಪತ್ರಕರ್ತ

ಪೆನ್ ಎಂಬ ಗನ್ ಹಿಡಿದು

ಸಮಾಜದ ಗಡಿಯ ಕಾಯುತ

ಮಳೆ, ಗಾಳಿಗಳ ಲೆಕ್ಕಿಸದೆ

ಸುನಾಮಿಯನು ಕ್ಯಾಮಾರಾದಲ್ಲಿ ಸೆರೆಹಿಡಿಯುತ

ಸುದ್ದಿ ಎಂಬ ಬಿಸಿಲ ಕುದುರೆಯ

ಬೆನ್ನ ಹಿಂದೆ ಸಾಗುತ…

ದಿನ ದಿನವೂ ನಿದ್ರೆ ಊಟವ ಲೆಕ್ಕಿಸದೆ

ಜನರ ಎಚ್ಚರಿಸುವ ಪತ್ರಕರ್ತ…

ಗಡಿ ಕಾಯುವ ಸೈನಿಕ,

ಊರು ಕಾಯುವ ಆರಕ್ಷಕ,

ಕಾರ್ಖಾನೆಯಲ್ಲಿ ದುಡಿವ ಕಾರ್ಮಿಕ,

ಎಲ್ಲರ ಸಾವಿನಲೂ ಅವರ ಕುಟುಂಬವ

ಕಾಯುವುದು ಸರ್ಕಾರದ ಕಾಯಕ..

ಆದರೆ..?

ಸುದ್ದಿಯ ನೀಡುತಲೇ ಪ್ರಾಣತೆರುವ

ಈತನಿಗೂ ಕುಟುಂಬವಿರಬಾರದೇ..?

ಆರಕ್ಷಕನಿಗೂ ಮೊದಲು ಹಾಜರಾಗುವ

ಈತನಿಗೂ ಹಸಿವು ಆಸೆಗಳಿರದೆ..?

ಅಳು ಮುಖದ ಮುಂದೆ ಮೈಕನು ಹುಡಿದು

ನ್ಯಾಯಕ್ಕಾಗಿ ಹೋರಾಡಬಾರದೇ..?

ಪ್ರಜೆಗಳನಿ ಕಿತ್ತು ತಿನ್ನುವ ಪ್ರಭುಗಳನ್ನು ಕಂಡು

ಈ ಕಾವಲು ನಾಯಿ ಬೊಗಳಬಾರದೇ..?

ರಾಜಕೀಯದ ದಿಕ್ಕು ಬದಲಿಸಬಲ್ಲ

ಧ್ವನಿ ಎತ್ತುವ ಸಮರ್ಥ!

ಜನಮನದೊಳಗೆ ಹೊಸ ವಿಚಾರಧಾರೆಯ

ಹುಟ್ಟಿಸುವ ಸೃಷ್ಠಿಕರ್ತ…!

ಜಗತ್ತಿನ ಸರ್ವಕ್ರಾಂತಿಯ

ಕಾರಣೀಕರ್ತ…!

ಅವನೇ ಪೆನ್ನಿನಂಚಿನಲೆ ಎಲ್ಲವನು

ಸಾಧಿಸುವ ಪತ್ರಕರ್ತ…!

– ಚೈತ್ರಾ ನಾಯಕ್, ತೃತೀಯ ಬಿ.ಎ. (ಪತ್ರಿಕೋದ್ಯಮ)


HOW TO BECOME POPULAR

There are two ways to become popular. One is genuine way and the other is the crooked one.

We can choose the genuine road only when

 • You really have the talent
 • You are a real genuine
 • You have the confidence to carry yourself around
 • You are highly sincere
 • You have strong history of famous people in your family

The above mentioned points are not adopted by every one hence, the lesser mortals. choose the other ways . They always have the following thoughts.

 1. “Rub them the right way” Attitude hard of the buttering?that’s the right key to success.
 2. Put on the face: behaving as if you are very  well educated and well connected, also behaving as if there is not a single topic that you can not debate on. This is a key to success.
 3. Blowing one’s own trumpet if no one thinks you are good enough, never mind, it is time for you to pat your own back! self praise is their key to success.
 4. A product well packed is everyone I eye candy. So if one has neither of the above mentioned talents, then the final resort is to become and popular. ” Ones you look convening enough, then no one can snatch that crown from you” But the above mention four points are only adopted by the people who lack talent rather then opting for the crooked path.Now ,if you think you are done with it,it is a time to look back in where ? into yourself, your conscience. Do you want to become famous and popular or do you wish to be infamous and popular ? Think again between the two. I prefer the first one. You choose yourself.

  – Divya J, III BSW


LIFE IS BEAUTIFUL…..

When I got enough confidence, the stage was gone. When I was sure of losing, I won. When I needed people the most, they left me. When I learned to dry my tears, I found a shoulder to cry on. When I mastered the skill of hating , somebody started loving me.

That’s life.

      When you are in problem, look squarely at the nature of your problems. Be alert and keep looking for the right solution. Look around your opportunities. Work hard, work constructive, it will help you to forget yourself and fortify you against stress, be genuinely interested in others problems, in the process you will be overcome weariness. Love the people, Care the people, it nourishes and restore you.Pray for them. Because, prayer connects you are being helped by someone  and that is wonderful confidence builder. Try to give inner strength to march outer stress: Look, Work, Love and Pray.

– Sr. Sindhu Antony, 1st  BSW


ಸ್ವಾತಂತ್ರ್ಯ ಅಂದು ಇಂದು

ಭಾರತ ದೇಶಕ್ಕೆ ಸ್ವಾತಂತ್ರ್ಯ ದೊರೆತು ಇಂದಿಗೆ ೬೫ನೇ ವರ್ಷಕ್ಕೆ ಪಾದಾರ್ಪಣೆಗೈಯುತ್ತಿದೆ. ನಮ್ಮ ದೇಶವು ಸುಮಾರು ೯ ವರ್ಷಗಳ ಕಾಲ ಬ್ರೀಟಿಷರ ಕಾಲ್ತುಳಿತಕ್ಕೆ ಸಿಲುಕಿ ತತ್ತರಿಸಿ ಹೋಗಿತ್ತು. ನಮ್ಮಲ್ಲಿ ಅಪಾರ ಸಂಪತ್ತಿಗೆ ಬ್ರಿಟೀಷರ ಕಣ್ಣು ಬಿದ್ದು, ಅದನ್ನು ದೋಚಲು ಭಾರತವನ್ನು ಆಕ್ರಮಿಸಿದರು. ಆನಂತರ ನಮ್ಮ ಆಡಳಿತ ಕ್ಷೇತ್ರಕ್ಕೆ ಕಾಲಿಟ್ಟರು. ಬ್ರಿಟೀಷರು ಭಾರತದಲ್ಲಿ ಸಾರ್ವಭೌಮರಾಗಿ ಮೆರೆದರು. ನಂತರ ಅವರ ದಬ್ಬಾಳಿಕೆ, ಕ್ರೌರ್ಯಗಳಿಂದ ರೋಸಿ ಹೋಗಿ ಸಹಸ್ರಾರು ದೇಶ ಪ್ರೇಮಿಗಳ ಸ್ವದೇಶಾಭಿಮಾನ ಹಾಗೂ ನಿರಂತರ ಹೋರಾಟದ ಕಾರಣ, ವಿಶ್ವ ಸಮರಗಳಿಗಿಂತ ಭಿನ್ನವಾಗಿ ಸತ್ಯ, ಶಾಂತಿ, ಎಂಬ ಅಸ್ತ್ರಗಳನ್ನು ಹಿಡಿದು, ಗಾಂಧೀಜಿಯವರ ನೇತೃತ್ವದಲ್ಲಿ ಭಾರತೀಯರ ಹೋರಾಟ ಆಗಸ್ಟ್ ೧೫, ೧೯೪೭ ರಂದು ಯಶಸ್ಸು ಕಂಡಿತು. ಗಾಂಧೀಜಿ ಹಾಗೂ ಹಲವಾರು ಸ್ವಾತಂತ್ರ್ಯ ಹೋರಾಟಗಾರರು ತಮ್ಮ ನೆತ್ತರು ಮಳೆಯನ್ನೇ ಹರಿಸಿ ಮದ್ಯರಾತ್ರಿ ತ್ರಿವರ್ಣದ್ವಜವನ್ನು ಮುಗಿಲೇರಿಸಿದರು.

ಬ್ರಿಟೀಷರ ಕೈಗೊಂಬೆಯಾಗಿದ್ದ ಭಾರತೀಯರಿಗೆ ಶಾಶ್ವತವಾದ ನೆಲೆಯನ್ನು ಕಂಡುಕೊಳ್ಳುವಲ್ಲಿ ಯಶಸ್ವಿ ಹೊಂದಿದೆ. ಆಗಶ್ಟ್ ೧೫ ಸ್ವಾತಂತ್ರ್ಯ ದಿನವನ್ನು ಭಾರತೀಯರೆಲ್ಲರೂ ತಮ್ಮ ಪ್ರಾಂತ್ಯ, ಜಾತಿ, ಮತ, ವರ್ಗಗಳ ಬೇಧಗಳಿಲ್ಲದೆ ಆಚರಿಸುವ ಹಬ್ಬ. ಇದೊಂದು ರಾಷ್ಟ್ರೀಯ ಹಬ್ಬ. ಭಾರತೀಯ ಏಕತೆಯ ಪ್ರತೀಕ. ಅಲ್ಲದೆ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿ ಪ್ರಾಣವನ್ನು ತಮ್ಮ ದೇಶಕ್ಕಾಗಿ ಪಣಕಿಟ್ಟ ಮಹಾತ್ಮಗಾಂಧಿ, ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್, ನೆಹರೂ ಮುಂತಾದ ಹೋರಾಟಗಾರರನ್ನು ನೆನೆಯುವ ದಿನ. ಭಾರತೀಯರ ಸ್ವಾಭಿಮಾನದ ಸುದಿನ. ಶತಮಾನಗಳ ದಾಸ್ಯದ ಸಂಕೋಲೆಯಿಂದ ಬಿಡುಗಡೆ ಪಡೆದ ಸಂತಸದ ದಿನ. ರಾಷ್ಟ್ರಭಕ್ತರಿಗೆ ಆನಂದದ ದಿನ.

ಆದರೆ ಅಂದಿನ ಸ್ವಾತಂತ್ರ್ಯವನ್ನು ಇಂದಿಗೆ ಹೋಲಿಸಿದರೆ ಅದು ನಾಮಕ್ಕಾಗಿ ಮಾತ್ರ ಎಂದೆನಿಸುವಂತಾಗಿದೆ, ಹೊರತು ಭಾರತೀಯರಿಗಲ್ಲ. ಇಂದಿಗೂ ಭಾರತ ಮಾತೆಯ ಮಕ್ಕಳಾದ ನಾವು ನೀವು ರಾಜಕೀಯದ ಕುತಂತ್ರಿಗಳ ಕೈ ಸೆರೆಯಾಗಿದ್ದೇವೆ. ಹಾಗಾದರೆ ನಮಗೆ ಸ್ವಾತಂತ್ರ್ಯ ಎಲ್ಲಿದೆ ? ಅಂದು ಬ್ರಿಟೀಷರು, ಇಂದು ನಮ್ಮವರೆ ಆದ ರಾಜಕಾರಣಿಗಳು ಭಾರತ ದೇಶವನ್ನು ಇಕ್ಕಟ್ಟಿನ ಪರಿಸ್ಥಿತಿಗೆ ಒಯ್ಯುತ್ತಿದ್ದಾರೆ. ಅಂದು ಗಾಂಧೀಜಿ ಅಹಿಂಸೆ, ಸತ್ಯ, ನ್ಯಾಯದ ಮೂಲಕ ಹೋರಾಡಿದ್ದಾರೆ. ಆದರೆ ಇಂದು ಎಲ್ಲಿ ನೋಡಿದರೂ ಅಸತ್ಯ, ಹಿಂಸೆ, ಅನ್ಯಾಯಗಳು. ಇದರಿಂದ ನಮ್ಮ ಅಂತ್ಯಕ್ಕೆ ನಾವೇ ಅಡಿಪಾಯ ಹಾಕಿಕೊಳ್ಳುತ್ತಿದ್ದೇವೆ.

ಅಂದು ಗಾಂಧೀಜಿ ತಮಗೆ ಯಾರಾದರೂ ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆ ತೋರಿಸುತ್ತಿದ್ದರು. ಆದರೆ ಇಂದು ನಮ್ಮನ್ನು ಯಾರಾದರೂ ಹೊಡೆದರೆ ಅವರ ಮೇಲೆ ಯಾವಾಗ ಸೇಡು ತೀರಿಸುತ್ತೇವೆಯೋ ಎಂದು ಕಾದುಕುಳಿತು ಕೊಳ್ಳುತ್ತೇವೆ. ಹೀಗಾದಲ್ಲಿ ನಮಲ್ಲಿ ಐಕ್ಯತೆ ಮೂಡಲು ಸಾದ್ಯವೇ? ನಮ್ಮಲ್ಲಿ ಇಲ್ಲ ಅಂತಾದರೆ ಬೇರೆದೇಶದವರಿಗೆ ಆಕ್ರಮಣ ಮಾಡಲು ಸುಲಭ ದಾರಿ ಮಾಡಿಕೊಟ್ಟಂತೆ ಆಗುತ್ತದೆ. ನಮ್ಮ ಗಾಂಧಿ ತತ್ವಗಳು ಎಲ್ಲಿ ಹೋಯಿತು ? ಅವುಗಳನ್ನು ಗಾಳಿಗೆ ತೂರಿಬಿಡುತ್ತಿದ್ದೇವೆ ಅಲ್ಲವೇ ಗೆಳೆಯರೇ. ಯುವ ಪೀಳಿಗೆಗಳಾದ ನಾವು ನೀವು ಇಂದು ಪುನಃ ಸ್ವಾತಂತ್ರ್ಯಕ್ಕಾಗಿ ಹೋರಾಡಬೇಕಾದ ಪರಿಸ್ಥಿತಿ ಬಂದೊಗಿದೆ. ಇದನ್ನು ತೊಲಗಿಸಲು ನಾವು- ನೀವು ಸನ್ನದ್ದರಾಗಬೇಕು. ಎದ್ದೇಳಿ ಗೆಳೆಯರೇ, ಹೋರಾಡಿ, ಸತ್ಯದ ಮಾರ್ಗದಲ್ಲಿ.

ಜೈ ಹಿಂದ್.

– ತಾರಾ, ದ್ವಿತೀಯ ಬಿ.ಎ, ಪತ್ರಿಕೋದ್ಯಮ ವಿಭಾಗ


ಮೌನ ಮಾತಾದಾಗ

ಮುಸ್ಸಂಜೆಯಲಿ
ತಂಗಾಳಿಯ ಸುಳಿಯಲಿ
ಸಿಲುಕಿದೆ ನಾನು
ನಿನ್ನ ಬಿಟ್ಟು ದೂರಾದಾಗ
ಮನಕೆ ನೋವಾದರೂ
ಒಂದು ಅರೆ ಕ್ಷಣ ತನ್ನನ್ನು ನಾ ಮರೆತೆ
ಕಾರಣವ ಕೆದಕಿದರೆ
ಅದು ಒಂದು ಪ್ರಶ್ನೆಯಾಗಿಯೇ
ಉಳಿದಿತ್ತು ಗೆಳೆಯಾ?………

– ಸುಕನ್ಯಾ ಕಾರಂತ್, ತೃತೀಯ ಬಿ.ಎ


ಹನಿಗವನ

ತಂಗಾಳಿ ಬೀಸುವ ಹೊತ್ತು
ನೀನಾಗ ಬರುವ ಹೊತ್ತು
ನಿನ್ನ ಸೌಂದರ್ಯದ ಸುತ್ತು
ನಾನಾಗ ಬಿದ್ದೆ ತಲೆಸುತ್ತು!

ಬದುಕಿನ ಹಾದಿಯಲ್ಲಿ
ಬೆಳಕನ್ನು ಚೆಲ್ಲಿ
ಕಣ್ಣರಳಿಸಿದೆ ನೀ
ಬರಡಾದ ಈ ಜೀವಕೀಗ
ನೆಲೆಯಾದೆ ನೀ!

ಜೀವನದ ರಂಗದಲ್ಲಿ
ಬರುವುದು ಕಷ್ಟ
ಆದರೇ ಅದನ್ನು
ಮರೆಸುವವರು
ಇರುವುದು ತುಂಬಾ ಕಷ್ಟ!

ಏರುಪೇರಿನ ಈ ಜೀವನಕ್ಕೆ
ಸರಿಯಾದ ದಾರಿಯ
ತೊರಿಸಿದೆ ನೀ
ಆದರೆ ನೀನಿಲ್ಲದೇ ಹೋದಾಗ
ಯಾರಿಗಾಗಿ ಕಾಯುತ್ತಿರಲಿ ನಾ ?

                                               – ಸುಕನ್ಯಾ ಕಾರಂತ್, ತೃತೀಯ ಬಿ.ಎ

 


ಬಿಂಬ

ಸವಿಯಾದ ಕನಸಲಿ
ಕಂಡೆ ನಾನು ನಿನ್ನನು
ಯಾಕೆ ಬರಲಿಲ್ಲ ಇನ್ನು
ನಿನ್ನ ಬರುವಿಕೆಗೆ ಕಾದಿಹೆನಾ!

ಕನಸಿನೊಳಗೊಂದು
ಕಂಡೆ ನಾ ನಿನ್ನ
ಆ ಮುದ್ದಾದ ಮೊಗವನು
ಬರದೇ ಹೋದೆ ನೀನೀಗ!

ನೀ ಬರದಿದ್ದರೇನಂತೆ
ನಿನ್ನೋಂದಿಗೆ ಕಳೆದ
ಆ ಸವಿ ನೆನಪುಗಳೇ
ನನ್ನ ಬಾಳಿಗೆ ದಾರಿದೀಪ

– ಸುಕನ್ಯಾ ಕಾರಂತ್, ತೃತೀಯ ಬಿ.ಎ